 ಅಂಬುಜದಳಾಕ್ಷಗೆ 
ಅಂಬುಜದಳಾಕ್ಷಗೆ ಮಂಗಳ ||ಪಲ್ಲವಿ||
ಸರ್ವ ಜೀವರಕ್ಷಕಗೆ ಮಂಗಳ ||ಅನು ಪಲ್ಲವಿ||

ಜಲಧಿಯೊಳಾಮ್ನಾಯ ತಂದಗೆ 
ಮಂಗಳಕುಲಗಿರಿ ತಾಳ್ದಗೆ 
ಜಯಮಂಗಳನೆಲನ ಕದ್ದಸುರನ ಗೆಲಿದಗೆ 
ಮಂಗಳಚೆಲುವ ನರಸಿಂಹಗೆ ಶುಭಮಂಗಳ ||1||

ವಸುಧೆಯ ಈರಡಿಗೈದಗೆ 
ಮಂಗಳವಸುದಾಧಿಪರಳಿದಗೆ 
ಜಯಮಂಗಳದಶಕಂಧರನನ್ನು ಗೆಲಿದಗೆ 
ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ ||2||

ಪುರ ತ್ರಯ ವಧುಗಳ ಗೆಲಿದಗೆ 
ಮಂಗಳತುರಗ ವಾಹನನಿಗೆ 
ಜಯ ಮಂಗಳವರ ನೆಲೆಯಾದಿಕೇಶವನಿಗೆ 
ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ ||3|||ರಾಘವೇಂದ್ರ ಫೌಂಡೇಶನ್ ಅವರ ಸಂಗ್ರಹಕನಕದಾಸರ ಕೃತಿಗಳು -ಟಿ.ಕೃಷ್ನಯ್ಯಸೆಟ್ಟಿ & ಸನ್ಸ್ ೧೯೪೦.

ನೋಡಿ
<ಕನಕದಾಸರ ಸಾಹಿತ್ಯ
       

ಉಲ್ಲೇಖ

Category:ಕನಕದಾಸ ಸಾಹಿತ್ಯ
Category:ದಾಸ ಸಾಹಿತ್ಯ